’ಯೋಗರಾಜಭಟ್ರು - ಗಣೇಶ್’ ಮತ್ತೆ ಜೊತೆಯಾಗಿ ಸಿನಿಮಾ ಮಾಡ್ತಾರೆ ಅಂತ ಕೇಳಿನೆ ಒಂಥರ ಖುಶಿಯಾಗಿತ್ತು. ಮೊದಲ ಸಲ ’ಗಾಳಿಪಟ’ ಚಿತ್ರದ ಪೊಸ್ಟರ್ ಪೇಪರ್ ನಲ್ಲಿ ಹಾಕಿದಾಗ ಥ್ರಿಲ್ ಆಗಿ ಬಿಟ್ಟಿದ್ದೆ.ಚಿತ್ರ ಕೋಡಚಾದ್ರಿ , ಸಕಲೆಶಪುರ ದಲ್ಲಿ ಚಿತ್ರಿಕರಣ ಮುಗಿಸಿದೆ ಅಂತ ಶುಕ್ರವಾರದ ಸಿನಿ ವಿಜಯದಲ್ಲಿ ಓದಿದಾಗ First day first Show ನೋಡಬೆಕು ಅಂತ ತಿರ್ಮಾನಿಸಿದ್ದೆ. ರೂಮ್ನಲ್ಲಿ ಬರಿ ’ಗಾಳಿಪಟ’ದ್ದೇ ಚರ್ಚೆ, ಅಂತೂ ಎರಡು ವಾರ ಮುಂದೆ ಹಾಕಿ ಭಟ್ಟರು ಕೊನೆಗೂ ೧೮ ರಂದು ರಿಲೀಸ್ ಮಾಡೆ ಬಿಟ್ಟ್ರು.ಶುಕ್ರವಾರ office ಇರುವುದರಿಂದ ಹೋಗಲು ಸಾಧ್ಯವಾಗಲಿಲ್ಲ, ಮಧ್ಯಾನ ಗೆಳೆಯ ’ದೀಪಕ್’ ಫೋನ್ ಮಾಡಿ ಚಿತ್ರ ಚೆನ್ನಾಗಿದೆ ಅಂತ ಹೇಳಿದ ಮೇಲಂತೂ ಇವಾಗ್ಲೆ ಎದ್ದು ಹೋಗಬೆಕು ಎಂದೆನಿಸಿತು. ಶನಿವಾರ ಬೇಗ ಎದ್ದು (ಪ್ರತಿ ಶನಿವಾರ ನಾನು ಏಳುವುದು ೧೦ ಗಂಟೆ ಮೇಲೆನೆ) ’ಸಿದ್ದು’ ಜೋತೆ ರಾತ್ರಿ ಷೋ ಗೆ ಟೀಕೆಟ್ ಕಾದಿರಿಸಲು ಕಾವೇರಿ ಚಿತ್ರಮಂದಿರಕ್ಕೆ ದೌಡಯಿಸಿದೆವು.ಅಷ್ಟೇನೂ ಜನಜಂಗುಳಿ ಇರದಿದ್ದ ಕಾರಣ ಟೀಕೆಟ್ ಬೇಗ ಸಿಕ್ಕಿತು (ಬೆಳಿಗ್ಗೆ ೯ ಗಂಟೆಗೆ ಜನ ಹೆಚ್ಚಾಗಿ ಇರೊದಿಲ್ಲ).
ರಾತ್ರಿ ಯಾವಾಗ ಆಗುತ್ತೊ ಅಂತ ಕಾದು ಕುಳಿತಿದ್ದ ನಮಗೆ ಟೀಕೆಟ್ ಸಿಕ್ಕ ಸಂತೋಷದ ಜೋತೆಗೆ ಕಾವೇರಿ ಅಂತಹ ಒಳ್ಳೆ ಚಿತ್ರಮಂದಿರಕ್ಕೆ ಚಿತ್ರ ಬಂದಿದ್ದು ಇನ್ನೊ ಖುಶಿ ಆಗಿತ್ತು. ರಾತ್ರಿ ೯ ಗಂಟೆಗೆ ಥೇಟರ್ ತಲುಪಿದಾಗ ಜನ ಕಿಕ್ಕಿರಿದು ತುಂಬಿದ್ದರು.
ಈವಾಗ ಚಿತ್ರ ವಿಮರ್ಶೆಗೆ ಬರೋಣ.
ಇದು 3 ಗೆಳೆಯರ ಚಿತ್ರ (ಗಣೇಶ, ದಿಗಂತ್,ರಾಜೇಶ್ ಕೃಷ್ಣನ್) , ಬೆಂಗಳೂರಿನ ಟ್ರಾಫೀಕ್ಕು, ಬ್ಯುಸಿ ಲೈಫು ಬೇಜಾರಾಗಿ ಎಲಾದ್ರು ಸ್ವಲ್ಪ ದಿನ ದೂರ ಹೋಗೊಣ ಅಂತ ತಿರ್ಮಾನಿಸಿ ಮೋಡಗಳೆ ತುಂಬಿಕೊಡಿರುವ ’ಮುಗಿಲಪೇಟೆ ’ ಗೆ ಬರುತ್ತಾರೆ ಅಲ್ಲಿ ಅವರಿಗೆ 3 ಹುಡುಗಿಯರ ಪರಿಚಯವಾಗುತ್ತದೆ, ಇದಿಷ್ಟು ಚಿತ್ರದ ಕಥೆ .
’ಮುಂಗಾರು ಮಳೆ’ ಯ ತಮ್ಮ ಅದ್ಭುತ ಚಿತ್ರಕಥೆಯಲ್ಲಿ ನೆನೆಸಿದ ಭಟ್ಟರು ’ಗಾಳಿಪಟ’ ವನ್ನು ಹಾರಿಸಲು ವಿಫಲವಾಗಿದ್ದರೆ. ಚಿತ್ರದಲ್ಲಿ ಕಥೆಯೇ ಇಲ್ಲ , ಮೊದಲ ೧೦ ನಿಮಿಷದಲ್ಲಿಯೆ ಕಥೆ ಮುಗಿದು ಹೋಗುತ್ತೆ , ಉಳಿದದ್ದೆಲ್ಲ ಬರಿ ಜೋಳ್ಳು. Editing ತುಂಬ ಕೆಟ್ಟದಾಗಿ ಬಂದಿದೆ, ಸನ್ನಿವೇಶಗಳು ಒಮ್ಮಿಂದೊಮ್ಮೆ ತೆರೆದುಕೊಳ್ಳುತ್ತವೆ. ಮಧ್ಯಂತರ ಬರುವವರೆಗೂ ನಮಗೆ ಚಿತ್ರದ ಕಥೆಯ ಕುರುಹೆ ಸಿಗಲಿಲ್ಲ. ಚಿತ್ರದ ಉದ್ದಕ್ಕೂ ಹಂದಿ ಹಿಡಿಯುವ ಸೀನ್ ಗಳೆ ಇವೆ ,ಕ್ಲೈಮಾಕ್ಸ್ ಅಂತೂ ಚಿತ್ರ ಬೇಗ ಮುಗಿಸಬೇಕು ಅನ್ನುವ ಆತುರದಲ್ಲಿ ತೆಗೆದಹಾಗೆ ಇದೆ.
ಆದರೆ ಚಿತ್ರದಲ್ಲಿ ಕೆಲವೊಂದು ಅದ್ಭುತ ಸನ್ನಿವೇಶಗಳಿವೆ,ಸುಂದರ ತಾಣಗಳಿವೆ (ಶಿವನಸಮುದ್ರವಂತೂ ನಯಾಗಾರ ಫಾಲ್ಸನಂತೆ ಕಾಣುತ್ತೆ), ರತ್ನವೇಲು ಅವರ ಉತ್ತಮ ಛಾಯಗ್ರಹಣವಿದೆ, ಜಯಂತ್ ಕಾಯ್ಕಿಣಿ ಸಾಹಿತ್ಯ್ಯ, ಹರಿಕೃಷ್ಣರವರ ಅಗತ್ಯಕ್ಕೆ ತಕ್ಕ ಸಂಗೀತ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಒಂದು ವಾಕ್ಯದ ಡೈಲಾಗ್ಗಳು, ದಿಗಂತ್ ಅವರ ಪ್ರಬುದ್ಧ ಅಭಿನಯ, ರಾಜೇಶ್ ಕೃಷ್ಣನ್ ಅವರ ಮೌನರೂಪಿ ನಟನೆ ಮನಸ್ಸಿಗೆ ಸಂತೋಷ ಕೊಡುತ್ತವೆ. ಇಲ್ಲಿ ನಿಜಕ್ಕೊ ಆಶ್ಚರ್ಯ ಅಂದರೆ ದಿಗಂತ್ ನಟನೆ, ’ಮುಂಗಾರು ಮಳೆ’ ಯಲ್ಲಿ ಒಂದೆರಡು ಸನ್ನಿವೇಶಕ್ಕೆ ಸೀಮಿತವಾಗಿದ್ದ ದಿಗಂತ್ ’ಗಾಳಿಪಟ’ ದಲ್ಲಿ ಚಿತ್ರದುದ್ದಕ್ಕೂ ಖುಶಿ ಕೊಡುತ್ತಾರೆ, ಅವರ ಕಾಮೆಡಿ ಟೈಮಿಂಗಂತು ಸುಪರ್! ರಂಗಾಯಣ ರಘು ಅವರು ಎರಡೇ ಎರಡು ಸೀನ್ ನಲ್ಲಿ ಬಂದು ಹೋದರೂ ಅವರ ನಟನೆ ಮಾತ್ರ ೧೦೦/೧೦೦ ಅಂಕ, ಬಹುಶ ಅವರಂತ versatile ನಟ ಕನ್ನಡದಲ್ಲಿ ಬೇರೊಬ್ಬರಿಲ್ಲ, ಆ ಪಾತ್ರವಂತು ಅವರು ಬಿಟ್ಟು ಬೆರೊಬ್ಬರು ಮಾಡಿದರೆ ಅಷ್ಟು effective ಆಗಿ ಇರುತ್ತಿರಲಿಲ್ಲವೆನೊ.ನೀತು ಅವರ ಬಯ್ಯುವ ಸ್ಟೈಲ್ ಅಂತೂ ಮಸ್ತ್ ಆಗಿದೆ, ಡೈಸಿ ಅವರ ಅಭಿನಯ ಪಾತ್ರಕ್ಕೆ ಕಳೆ ಕೊಟ್ಟಿದೆ.ಗಣೇಶ್ ತಾವೊಬ್ಬ Natural Actor ಅಂತ ಮತ್ತೆ ತೋರಿಸಿಕೋಟ್ಟಿದ್ದಾರೆ. ಬಹುಶ ಅವರೊಬ್ಬರಿಗೆ ಹಾಕಿಕೊಂಡು ಚಿತ್ರ ಮಾಡಿದರೆ ಚೆನ್ನಗಿ ಇರುತ್ತಿತ್ತೆನೋ ಅನ್ನಿಸುತ್ತದೆ ಯಾಕಂದರೆ ಮೂವರು ನಾಯಕರಿಗೆ screen share ಮಾಡುವ ಪ್ರಯತ್ನಕ್ಕೆ ಕಥೆಯೇ ಹಾಳಗಿ ಹೋಗಿದೆ.
ಚಿತ್ರ ನೋಡಿದ ಮೇಲೆ ನನಗಂತೂ ತುಂಬ ಬೇಜಾರಯಿತು , ಚಿತ್ರದಲ್ಲಿ ಎಲ್ಲಾ ಇದ್ದರೂ ಏನೊ ಒಂದು ಕಳೆದುಕೊಂಡಿರುವ ಅನುಭವ, ಇದು ಒಂಥರ a mobile with all features but without SIM card. ಆದರೂ ’ಗಾಳಿಪಟ’ ’ಹಾರುತ್ತ’ ಇದೆ ಬಹುಶ ’ಗಣೇಶ’ ನ ಮಹಿಮೆ ಇರಬೇಕು.
ಭಟ್ಟರು ಗಣೇಶ ಮತ್ತು ಸುಂದರವಾದ ತಾಣಗಳಿದ್ದರೆ ಚಿತ್ರ ಹಿಟ್ ಆಗುತ್ತೆ ಅಂತ ನಂಬಿದ್ದರಾಂತ ಕಾಣುತ್ತೆ. ಭಟ್ಟರೆ ಸ್ವಲ್ಪ ಚಿತ್ರದ ಕಥೆ ಮೇಲೂ ಕೆಲ್ಸಾ ಮಾಡ್ರಿ.
ಆದರೂ ನೀವು ಒಮ್ಮೆ ಚಿತ್ರ ನೋಡಲೆಬೇಕು ಯಾಕಂದ್ರೆ ನಮ್ಮ ಗಣೇಶ ಇದ್ದಾನಲ್ಲ ;-)
ನಿಮ್ಮ ಕಮೆಂಟ್ ಗಳಿಗೆ ಸ್ವಾಗತ
-ಕರ್ಣ
4 comments:
ಈ ಚಿತ್ರ ಹಿಟ್ ಯಾಕ್ ಆಗ್ತಿದೆಯೋ???
ನನ್ನೈನನನೈ...
ಜನರಿಗೆ ಬುದ್ಧಿ ಇಲ್ಲದೆಯೋ ???
ನನ್ನೈನನನೈ...
ಇಲ್ಲೇನೂ ಕಥೆಯಿಲ್ಲ, ಲೊಕೇಶನ್ಸ್ ಎಲ್ಲೆಲ್ಲಾ
ಆದ್ರೂನೂ ನಾವಂತೂ ನೋಡೋದು ಬಿಡೊss ದಿಲ್ಲಾ...
ಗಾss ಳಿಪಟ... ಗಾss ಳಿಪಟ...
ಚಿತ್ರ ವಿಮರ್ಶೆಗೆ ತುಂಬಾ ಧನ್ಯವಾದಗಳು. ನಾನಿನ್ನೂ ನೋಡಿಲ್ಲ. ನೋಡ್ಬೇಕಾದ್ರೆ expectation ಕಡಿಮೆ ಮಾಡ್ಕೊಂಡೇ ನೋಡ್ತೀನಿ ಬಿಡಿ...
ಒಳ್ಳೆ remix :) ಒಂದು ಸಲ ಹೋಗಿ ನೋಡಬಹುದು,expectation ಕಡಿಮೆ ಇಟ್ಗೊಂಡು.
ಕರ್ಣ ನೀನು ನನ್ನ ೧೦೦ ರುಪಾಯೇ ಉಳಿಸಿದೆ ಮಗಾ :) ನಾನು ಅದನ್ನ ಪೆವೆರ್ ಅಲ್ಲಿ ನೋಡೋಣ ಅಂತ ಇದ್ದೆ.
ಆದರೂ ನೀವು ಒಮ್ಮೆ ಚಿತ್ರ ನೋಡಲೆಬೇಕು ಯಾಕಂದ್ರೆ ನಮ್ಮ ಗಣೇಶ ಇದ್ದಾನಲ್ಲ ;-) .. Ninne nodide movie naa .. Mosa illa 100 rupayeege ... Hegu nanna girlfriend ticket tugondlu :)
Post a Comment