Thursday, March 27, 2008

ಮಳೆ ನಿಂತು ಹೋದ ಮೇಲೆ.....

ಎರಡು ದಿನಗಳ ಹಿಂದೆ ಧೋ.... ಅಂತ ಸುರಿದ ಮಳೆ ನಮ್ಮ ಬೆಂಗಳೂರನ್ನು ತಂಪಾಗಿಸಿತು ಹಾಗೆ ನಮ್ಮ ಮನಸ್ಸನ್ನೊ ಕೂಡ , ಬೆಸಿಗೆಯಲ್ಲಿ ಮಳೆ ಬಂದದ್ದು ಎಲ್ಲರಿಗೂ ಸಂತಸ ತಂದಿತ್ತು ಆದರೆ ಇದೇ ಮಳೆ ನಮ್ಮ "ನವ(new) ಬ್ಯಾಂಗ್ಲುರ್ " ನ ಐತಿಹಾಸಿಕ ಸ್ಥಳಗಳಾದ ಬೊಮ್ಮನಹಳ್ಳಿ , ಸಿಲ್ಕ್ ಬೋರ್ಡ್, ಕೂಡ್ಲುಗೆಟ್,ಬೇಗುರ್ ರೋಡ್ ನ ನಿವಾಸಿಗಳಿಗೆ ಹಾಗೂ ಹೋಸುರ್ ರೋಡ್ ನ ಉದ್ದಗಲಕ್ಕು ಇರುವ ಕಂಪನಿಗಳಲ್ಲಿ ಕೆಲಸ ಮಾಡುವ ನನ್ನಂಥ ಎಷ್ಟೋ ಜನರಿಗೆ ತುಂಬಾ ತೊಂದರೆ ಕೊಟ್ಟಿತ್ತು. ಬೆಂಗಳೂರಿನಲ್ಲಿ ಮಳೆ ಆಗಿದೆ ಅಂದ್ರೆ ಸಾಕು ಮೊದಲು ಹೋಸುರ್ ರೋಡ್ ನಲ್ಲಿರುವವರ ಎದೆ ಝಲ್ ಎನ್ನುತ್ತೆ ಯಾಕಂದ್ರೆ ಬೊಮ್ಮನಹಳ್ಳಿ ಸಿಗ್ನಲ್ ನಲ್ಲಿ K.R.S ಡ್ಯಾಮ್ ಗೇಟ್ ತೆಗೆದರೆ ಹೇಗೆ ನೀರು ಬರುತ್ತೋ ಹಾಗೆ ನೀರು ಬಂದಿರುತ್ತೆ, ಒಂದೊಂದು ಸಲ ಬೊಮ್ಮನಹಳ್ಳಿ ಯಲ್ಲಿ ಈ ಹಿಂದೆ ಡ್ಯಾಮ್ ಎನಾದ್ರೂ ಇತ್ತ ಅನ್ನೊ ಸಂದೇಹ ಬರುತ್ತೆ.ಮಳೆಗಾಲದಲ್ಲಿ ಬೊಮ್ಮನಹಳ್ಳಿಯಲ್ಲಿ rescue boat ಇಟ್ರೆ ವಾಸಿ ಅನ್ಸುತ್ತೆ. ಟ್ರಾಫಿಕ್ ಅಂತೂ ಕೆಳಲೇ ಬೇಡಿ, ಮೊದಲೇ ಟ್ರಾಫಿಕ್ ಗೆ ಹೆಸರು ವಾಸಿಯಾದ ಹೋಸುರ್ ರೋಡ್ನಲ್ಲಿ ಇನ್ನಷ್ಟು ವಾಹನಗಳು ಮುಂದೆಯೂ ಹೋಗದೆ ಹಿಂದೆಯೂ ಬರಕ್ಕೆ ಆಗದೆ ನಿಂತುಬಿಡುತ್ತವೆ ಅಲ್ಲಿಗೆ ಮುಗಿತು ನೋಡಿ ಹಾರ್ನಗಳ ಸದ್ದು(ಅದ್ರಲ್ಲಿ ನಮ್ಮ ಕ್ಯಾಬ್ ಡ್ರೈವರ್ ಹಾರ್ನ್ ಬಾರಿಸುವದರಲ್ಲಿ ಏತ್ತಿದ ಕೈ , ನಾನು ಹಾರ್ನ ಬಾರಿಸುವದರಿಂದಲೆ ಜನ ದಾರಿ ಕೊಡ್ತಾರೆ ಅನ್ನೊ ಗಾಢ ನಂಬಿಕೆ ಅವನಿಗೆ ), ಜನರ ಪರದಾಟ, ಬೈಕ್ ಸವಾರರ ಸರ್ಕಸ್, ಕಾರ್ ನಲ್ಲಿ ಕೂತವರ ಅಸಾಹಯಕತೆ , B.M.T.C ಬಸ್ಸಿನಲ್ಲಿ ತುಂಬಿ ತುಳುಕಾಡುತ್ತಿರುವ ಜನ , ಸುರಿಯುತ್ತಿರುವ ಮಳೆ ಅಂಥದರಲ್ಲಿ ನಮ್ಮ ಎಫ್.ಎಂ. ಸ್ಟೇಷನ್ ಒಂದರಲ್ಲಿ ’ಸಕತ್ ಹಾಟ್’ ಮಗಾ ಅಂತ ಹೇಳಿದಾಗ ಮುಗುಳ್ನಕ್ಕೆ, ಅದೇ ಎಫ್.ಎಂ. ನಲ್ಲಿ ’ಮಿಲನ’ ಚಿತ್ರದ "ಮಳೆ ಬಂದು ನಿಂತ ಮೇಲೆsssss " ತೇಲಿ ಬಂದಾಗ, ಆ ಸಂಧರ್ಭಕ್ಕೆ ಬೈಕ್ ಸವಾರನೊಬ್ಬನ ಮನಸ್ಥಿತಿ ನೆನೆಸಿಕೊಂಡಗ ಮೂಡಿ ಬಂದ Remix ಹಾಡು.
ಈ ಹಾಡನ್ನು ಹೋಸುರ್ ರೋಡ್ ನಲ್ಲಿರುವ ಎಲ್ಲ ಕಂಪನಿಗಳ ನೌಕರರಿಗೆ ಅರ್ಪಿಸುತ್ತಿದ್ದೆನೆ.

ಸೂಚನೆ: ಮಿಲನ ಹಾಡಿನ tune ಗೆ ತಕ್ಕಂತೆ ಕೆಳಿದರೆ ಸೂಕ್ತ.

ಮಳೆ ಬಂದು ಹೋದ ಮೇಲೆ ಬೊಮ್ಮನಹಳ್ಳಿಯಲ್ಲಿ ತುಂಬಿದೆ
ಸಂಜೆ ಆರು ಆದ ಮೇಲೆ ಟ್ರಾಫಿಕ್ ಎಲ್ಲ ನಿಂತಿದೆ
ಹೋಗುವುದು ಯಾವ ಕದೆ ತಿಳಿಯದಾಗಿದೆ
ಜನರ ಪರದಾಟ ನೋಡದಾಗಿದೆ
ಮಳೆ ಬಂದು ಹೋದ ಮೇಲೆ ಬೊಮ್ಮನಹಳ್ಳಿಯಲ್ಲಿ ತುಂಬಿದೆ
ಸಂಜೆ ಆರು ಆದ ಮೇಲೆ ಟ್ರಾಫಿಕ್ ಎಲ್ಲ ನಿಂತಿದೆ

ಹೋಸುರ್ ರೋಡು ಟ್ರಾಫಿಕ್ ನೋಡಿ ನಡುಗಿದೆ ಗಡಗಡ
ಸಿಲ್ಕ್ ಬೋರ್ಡ್ ಫ್ಲೈ ಒವರ್ ಕಂಡ ಕೂಡಲೆ ಎದೆಯಲಿ ಢವಢವ
ಬೇಗ ಓಡಿ ಹೋಗಿ ಮನೆಗೆ ತಲುಪುವ ಕಾತರ
ಬಿಡನು ಪೋಲಿಸ್ ಮಾಮಾ ಬೈಕ್ ನ ಸರಸರ
ಬೈಕ್ ತೂರಿಸಲು ಚುರು ಜಾಗ ಬೇಕಿದೆ
ಹಾರ್ನ ಹೋಡೆದರೂ ಎದುರಿನ ಕಾರು ಚಲಿಸದಾಗಿದೆ

ಮಳೆ ಬಂದು ಹೋದ ಮೇಲೆ ಬೊಮ್ಮನಹಳ್ಳಿಯಲ್ಲಿ ತುಂಬಿದೆ
ಸಂಜೆ ಆರು ಆದ ಮೇಲೆ ಟ್ರಾಫಿಕ್ ಎಲ್ಲ ನಿಂತಿದೆ

ಪೋಲಿಸ್ ಬಿಟ್ಟ ಕೂಡಲೆ ಕೊಟ್ಟೆನಾ ಎಕ್ಸಲೇಟರ್
ಸ್ವಲ್ಪ ದೂರ ಹೋಗುವುದರಲ್ಲಿ ಠುಸ್ಸೆಂದಿತು ಬೈಕ್ ನ ಟೈರ್
ಹುಡುಕಲಿ ಎಲ್ಲಿ ನಾ ಪಂಚ್ಚರ್ ಶಾಪನು
ಆಫಿಸ್ ಗೆ ಬೈಕ್ ತಂದು ಕೆಟ್ಟೆ ನಾನು
ತರನು ಬೈಕನು ಹೋಸುರ್ ರೋಡಲಿ
ಹೇಳು ನೀ ನಾ ಎನು ಮಾಡಲಿ ?

ಮಳೆ ಬಂದು ಹೋದ ಮೇಲೆ ಬೊಮ್ಮನಹಳ್ಳಿಯಲ್ಲಿ ತುಂಬಿದೆ
ಸಂಜೆ ಆರು ಆದ ಮೇಲೆ ಟ್ರಾಫಿಕ್ ಎಲ್ಲ ನಿಂತಿದೆ

Monday, March 10, 2008

ಹಾಗಂತ ಅವನೇನು ಕೆಟ್ಟವನಲ್ಲ !!!

ಮೊನ್ನೆವರೆಗೂ ಅನ್ಯೋನ್ಯವಾಗಿದ್ದ ಗೆಳೆಯನೊಬ್ಬ ಹಠತ್ತಾಗಿ ಬದಲಾದದನ್ನು ಕಂಡು ತುಂಬ ಬೇಜರಾಯಿತು.ಹಲವು ವರ್ಷಗಳ ಗೆಳೆತನ ನಿಧಾನವಾಗಿ ಹಳಸಲು ಪ್ರಾರಂಭಿಸಿದೆ, ಅದಕ್ಕೆ ನಾನು ಹೊಣೆನಾ ಇಲ್ಲ ಅವನು ಹೊಣೆನಾ ಅಥವಾ ಪರಿಸ್ಥಿತಿ ನಮ್ಮಿಬ್ಬರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆಯೊ ಗೊತ್ತಿಲ್ಲ, ಒಟ್ಟಿನಲ್ಲಿ ಈಗಂತೂ ನಾವು ಮೋದಲು ಇದ್ದ ಹಾಗೆ ಇಲ್ಲ.ಅದು ಮತ್ತೆ ಸರಿ ಹೊಗುತ್ತೆ ಅನ್ನುವ ಭರವಸೆ ಕೂಡ ನನಗಿಲ್ಲ , ಅದನ್ನು ಸರಿಪಡಿಸುವ ಶಕ್ತಿಯೂ ಕೂಡ ನನಗಿಲ್ಲ ಏಕೆಂದರೆ ಅದರಲ್ಲಿ ಸರಿಪಡಿಸುವದೇನು ಇಲ್ಲ.ಈಗಲೂ ಕೂಡ ಗೆಳೆಯರ ಹಿಂಡಿನಲ್ಲಿ ಜೋತೆಯಾಗಿ ತಿರುಗುತ್ತೇವೆ ಚೆನ್ನಾಗಿ ಹರಟುತ್ತೇವೆ ಆದರೆ ಇಬ್ಬರೇ ಇದ್ದಾಗ ಮಾತ್ರ ಮೌನವು ಮಾತಿನ ಸ್ಥಾನವನ್ನು ಆಕ್ರಮಿಸಿಕೊಂಡಿಬಿಟ್ಟಿರುತ್ತದೆ.ಮಾತಾಡುವದು ಒಂದು formality ಆಗಿ ಉಳಿಯುತ್ತದೆ ಮನಬಿಚ್ಚಿ ಮಾತಾಡಿಲಿಕ್ಕೆ ಸಾಧ್ಯವೇ ಆಗುವುದಿಲ್ಲ. ಜೋರಾಗಿ ಜಗಳವಾಡಿ ಮಾತು ಬಿಟ್ಟರೆ ಅದೊಂದು ಥರ ಮನಸ್ಸಿಗೆ ಸಮಾಧಾನ ಇರುತ್ತೆ ಯಾಕಂದ್ರೆ ಅಂಥವರನ್ನು ಮತ್ತೇಂದು ನೋಡುವುದಿಲ್ಲವೆಂಬ ನಿರಾಳ ಭಾವ ಇರುತ್ತೆ. ಆದರೆ ಇಲ್ಲಿ ಹಾಗಿಲ್ಲ ಅವರು ನಮ್ಮ ಜೋತೆಗೆ ಇರುತ್ತಾರೆ ಮಾತು ಕಡಿಮೆ, ಒಮ್ಮೊಮ್ಮೆ mail ಮುಖಾಂತರ ಕೆಲವು ಸಂಗತಿಗಳು ಗೊತ್ತಾಗುತ್ತೆ, ಎದುರು ಸಿಕ್ಕರೆ ಮತ್ತೆ ಅದೇ ಮುಖ ಏನೂ ನಡೆದೆ ಇಲ್ಲ ಅನ್ನುವ ಥರ. ಇಂಥವರು ಬಿಸಿ ತುಪ್ಪದ ಹಾಗೆ ಬಿಟ್ಟು ಬಿಡೋಣ ಎಂದರೆ ಆಗದು ಹಳೆ ನೆನಪುಗಳು , ಹಲವು ವರ್ಷದ ಗೆಳೆತನಕ್ಕೆ ತಿಲಾಂಜಲಿ ಇಡಲು ಯಾಕೋ ಮನಸ್ಸು ಬರ್ತಿಲ್ಲ. ಹಾಗಂತ ಅವನೇನು ಕೆಟ್ಟವನಲ್ಲ ಆದರೆ ಒಮ್ಮೋಮ್ಮೆ ವಿಚಿತ್ರವಾಗಿ ಆಡ್ತಾನೆ, ಬಹಳ ಕಠೋರವಾಗಿ ಮಾತಾಡ್ತಾನೆ. ಕೆಲಸದ ಒತ್ತಡವೋ ಅಥವಾ ಹೊಸ ಗೆಳೆಯರ ಸಂಘವೋ ಇಲ್ಲಾ ಅವನು ತಾನಗಿಯೇ ತಂದು ಕೊಂಡ ಬದಲಾವಣೆಗಳೋ ಗೊತ್ತಿಲ್ಲ. ಹಿಂಸೆ ಎಂದರೆ ಅಂಥವರ ಜೋತೆ ವಾದ ಮಾಡಲು ಕೂಡ ಆಗುವುದಿಲ್ಲ. So ಸರಿಪಡಿಸುವ ಬಗ್ಗೆ ಮರೆತುಬಿಡಿವುದೇ ಒಳ್ಳೇಯದು. ಇಂತಹ ಅನೇಕ ಸಂಬಂಧಗಳು ನಿಮ್ಮ ಸುತ್ತಲೂ ಇರಬಹುದು (colleauges,friends,relatives ..etc) . ಮನುಷ್ಯನ ಪ್ರವ್ರುತ್ತಿಯೇ ಹಾಗೆ ತನಗೆ ಬೇಡದ ಸಂಬಂಧಗಳನ್ನು ಸರಿಪಡಿಸಲಿಕ್ಕೆ ಹೋಗುವುದೆ ಇಲ್ಲ ಅವನ್ನು ಅಲ್ಲೇ ಹೂಳೀಬಿಡುತಾನೆ. ಮನುಷ್ಯನ ಸಂಬಂಧಗಳು ಅರ್ಥವಾಗಲೆಂದೆ psychology ಸ್ಟಡಿ ಮಾಡ್ತಾರೆನೋ, ಆದರೂ ಅವು ಅಷ್ಟು easy ಆಗಿ ಅರ್ಥ ಆಗೊಲ್ಲ.
ಕೆಲವು ಸಂಬಂಧಗಳು sudden ಆಗಿ ಹುಟ್ಟಿ ಅಷ್ಟೆ sudden ಆಗಿ ಮಾಯವಾಗುತ್ತವೆ. ಅಂಥವಕ್ಕೆ ನಮ್ಮ ಹ್ರುದಯ ಅಷ್ಟಾಗಿ ಸ್ಪಂದಿಸುವದಿಲ್ಲ , ಆದರೆ ಇವು ಹಾಗಲ್ಲ ಇದರಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಷ್ಟೋ ವರ್ಷಗಳಿಂದ maintain ಮಾಡಿಕೊಂಡು ಬಂದಿದನ್ನು ಹಾಗೇ ಸರ್ss ಅಂತ ಜಾರಿ ಹೋಗಿ ಬಿಡಲಿಕ್ಕೆ ಮನಸ್ಸು ಒಪ್ಪುತ್ತಿಲ್ಲ, ಜಾರಿ ಹೋಗದಕ್ಕೆ ಪ್ರಯತ್ನಿಸುತ್ತಿದ್ದೆನೆ.

ಸೂಚನೆ:ನನ್ನ ಬರವಣಿಗೆ ಮಾತ್ರ comment ಮಾಡಿ ;-)