Thursday, March 27, 2008

ಮಳೆ ನಿಂತು ಹೋದ ಮೇಲೆ.....

ಎರಡು ದಿನಗಳ ಹಿಂದೆ ಧೋ.... ಅಂತ ಸುರಿದ ಮಳೆ ನಮ್ಮ ಬೆಂಗಳೂರನ್ನು ತಂಪಾಗಿಸಿತು ಹಾಗೆ ನಮ್ಮ ಮನಸ್ಸನ್ನೊ ಕೂಡ , ಬೆಸಿಗೆಯಲ್ಲಿ ಮಳೆ ಬಂದದ್ದು ಎಲ್ಲರಿಗೂ ಸಂತಸ ತಂದಿತ್ತು ಆದರೆ ಇದೇ ಮಳೆ ನಮ್ಮ "ನವ(new) ಬ್ಯಾಂಗ್ಲುರ್ " ನ ಐತಿಹಾಸಿಕ ಸ್ಥಳಗಳಾದ ಬೊಮ್ಮನಹಳ್ಳಿ , ಸಿಲ್ಕ್ ಬೋರ್ಡ್, ಕೂಡ್ಲುಗೆಟ್,ಬೇಗುರ್ ರೋಡ್ ನ ನಿವಾಸಿಗಳಿಗೆ ಹಾಗೂ ಹೋಸುರ್ ರೋಡ್ ನ ಉದ್ದಗಲಕ್ಕು ಇರುವ ಕಂಪನಿಗಳಲ್ಲಿ ಕೆಲಸ ಮಾಡುವ ನನ್ನಂಥ ಎಷ್ಟೋ ಜನರಿಗೆ ತುಂಬಾ ತೊಂದರೆ ಕೊಟ್ಟಿತ್ತು. ಬೆಂಗಳೂರಿನಲ್ಲಿ ಮಳೆ ಆಗಿದೆ ಅಂದ್ರೆ ಸಾಕು ಮೊದಲು ಹೋಸುರ್ ರೋಡ್ ನಲ್ಲಿರುವವರ ಎದೆ ಝಲ್ ಎನ್ನುತ್ತೆ ಯಾಕಂದ್ರೆ ಬೊಮ್ಮನಹಳ್ಳಿ ಸಿಗ್ನಲ್ ನಲ್ಲಿ K.R.S ಡ್ಯಾಮ್ ಗೇಟ್ ತೆಗೆದರೆ ಹೇಗೆ ನೀರು ಬರುತ್ತೋ ಹಾಗೆ ನೀರು ಬಂದಿರುತ್ತೆ, ಒಂದೊಂದು ಸಲ ಬೊಮ್ಮನಹಳ್ಳಿ ಯಲ್ಲಿ ಈ ಹಿಂದೆ ಡ್ಯಾಮ್ ಎನಾದ್ರೂ ಇತ್ತ ಅನ್ನೊ ಸಂದೇಹ ಬರುತ್ತೆ.ಮಳೆಗಾಲದಲ್ಲಿ ಬೊಮ್ಮನಹಳ್ಳಿಯಲ್ಲಿ rescue boat ಇಟ್ರೆ ವಾಸಿ ಅನ್ಸುತ್ತೆ. ಟ್ರಾಫಿಕ್ ಅಂತೂ ಕೆಳಲೇ ಬೇಡಿ, ಮೊದಲೇ ಟ್ರಾಫಿಕ್ ಗೆ ಹೆಸರು ವಾಸಿಯಾದ ಹೋಸುರ್ ರೋಡ್ನಲ್ಲಿ ಇನ್ನಷ್ಟು ವಾಹನಗಳು ಮುಂದೆಯೂ ಹೋಗದೆ ಹಿಂದೆಯೂ ಬರಕ್ಕೆ ಆಗದೆ ನಿಂತುಬಿಡುತ್ತವೆ ಅಲ್ಲಿಗೆ ಮುಗಿತು ನೋಡಿ ಹಾರ್ನಗಳ ಸದ್ದು(ಅದ್ರಲ್ಲಿ ನಮ್ಮ ಕ್ಯಾಬ್ ಡ್ರೈವರ್ ಹಾರ್ನ್ ಬಾರಿಸುವದರಲ್ಲಿ ಏತ್ತಿದ ಕೈ , ನಾನು ಹಾರ್ನ ಬಾರಿಸುವದರಿಂದಲೆ ಜನ ದಾರಿ ಕೊಡ್ತಾರೆ ಅನ್ನೊ ಗಾಢ ನಂಬಿಕೆ ಅವನಿಗೆ ), ಜನರ ಪರದಾಟ, ಬೈಕ್ ಸವಾರರ ಸರ್ಕಸ್, ಕಾರ್ ನಲ್ಲಿ ಕೂತವರ ಅಸಾಹಯಕತೆ , B.M.T.C ಬಸ್ಸಿನಲ್ಲಿ ತುಂಬಿ ತುಳುಕಾಡುತ್ತಿರುವ ಜನ , ಸುರಿಯುತ್ತಿರುವ ಮಳೆ ಅಂಥದರಲ್ಲಿ ನಮ್ಮ ಎಫ್.ಎಂ. ಸ್ಟೇಷನ್ ಒಂದರಲ್ಲಿ ’ಸಕತ್ ಹಾಟ್’ ಮಗಾ ಅಂತ ಹೇಳಿದಾಗ ಮುಗುಳ್ನಕ್ಕೆ, ಅದೇ ಎಫ್.ಎಂ. ನಲ್ಲಿ ’ಮಿಲನ’ ಚಿತ್ರದ "ಮಳೆ ಬಂದು ನಿಂತ ಮೇಲೆsssss " ತೇಲಿ ಬಂದಾಗ, ಆ ಸಂಧರ್ಭಕ್ಕೆ ಬೈಕ್ ಸವಾರನೊಬ್ಬನ ಮನಸ್ಥಿತಿ ನೆನೆಸಿಕೊಂಡಗ ಮೂಡಿ ಬಂದ Remix ಹಾಡು.
ಈ ಹಾಡನ್ನು ಹೋಸುರ್ ರೋಡ್ ನಲ್ಲಿರುವ ಎಲ್ಲ ಕಂಪನಿಗಳ ನೌಕರರಿಗೆ ಅರ್ಪಿಸುತ್ತಿದ್ದೆನೆ.

ಸೂಚನೆ: ಮಿಲನ ಹಾಡಿನ tune ಗೆ ತಕ್ಕಂತೆ ಕೆಳಿದರೆ ಸೂಕ್ತ.

ಮಳೆ ಬಂದು ಹೋದ ಮೇಲೆ ಬೊಮ್ಮನಹಳ್ಳಿಯಲ್ಲಿ ತುಂಬಿದೆ
ಸಂಜೆ ಆರು ಆದ ಮೇಲೆ ಟ್ರಾಫಿಕ್ ಎಲ್ಲ ನಿಂತಿದೆ
ಹೋಗುವುದು ಯಾವ ಕದೆ ತಿಳಿಯದಾಗಿದೆ
ಜನರ ಪರದಾಟ ನೋಡದಾಗಿದೆ
ಮಳೆ ಬಂದು ಹೋದ ಮೇಲೆ ಬೊಮ್ಮನಹಳ್ಳಿಯಲ್ಲಿ ತುಂಬಿದೆ
ಸಂಜೆ ಆರು ಆದ ಮೇಲೆ ಟ್ರಾಫಿಕ್ ಎಲ್ಲ ನಿಂತಿದೆ

ಹೋಸುರ್ ರೋಡು ಟ್ರಾಫಿಕ್ ನೋಡಿ ನಡುಗಿದೆ ಗಡಗಡ
ಸಿಲ್ಕ್ ಬೋರ್ಡ್ ಫ್ಲೈ ಒವರ್ ಕಂಡ ಕೂಡಲೆ ಎದೆಯಲಿ ಢವಢವ
ಬೇಗ ಓಡಿ ಹೋಗಿ ಮನೆಗೆ ತಲುಪುವ ಕಾತರ
ಬಿಡನು ಪೋಲಿಸ್ ಮಾಮಾ ಬೈಕ್ ನ ಸರಸರ
ಬೈಕ್ ತೂರಿಸಲು ಚುರು ಜಾಗ ಬೇಕಿದೆ
ಹಾರ್ನ ಹೋಡೆದರೂ ಎದುರಿನ ಕಾರು ಚಲಿಸದಾಗಿದೆ

ಮಳೆ ಬಂದು ಹೋದ ಮೇಲೆ ಬೊಮ್ಮನಹಳ್ಳಿಯಲ್ಲಿ ತುಂಬಿದೆ
ಸಂಜೆ ಆರು ಆದ ಮೇಲೆ ಟ್ರಾಫಿಕ್ ಎಲ್ಲ ನಿಂತಿದೆ

ಪೋಲಿಸ್ ಬಿಟ್ಟ ಕೂಡಲೆ ಕೊಟ್ಟೆನಾ ಎಕ್ಸಲೇಟರ್
ಸ್ವಲ್ಪ ದೂರ ಹೋಗುವುದರಲ್ಲಿ ಠುಸ್ಸೆಂದಿತು ಬೈಕ್ ನ ಟೈರ್
ಹುಡುಕಲಿ ಎಲ್ಲಿ ನಾ ಪಂಚ್ಚರ್ ಶಾಪನು
ಆಫಿಸ್ ಗೆ ಬೈಕ್ ತಂದು ಕೆಟ್ಟೆ ನಾನು
ತರನು ಬೈಕನು ಹೋಸುರ್ ರೋಡಲಿ
ಹೇಳು ನೀ ನಾ ಎನು ಮಾಡಲಿ ?

ಮಳೆ ಬಂದು ಹೋದ ಮೇಲೆ ಬೊಮ್ಮನಹಳ್ಳಿಯಲ್ಲಿ ತುಂಬಿದೆ
ಸಂಜೆ ಆರು ಆದ ಮೇಲೆ ಟ್ರಾಫಿಕ್ ಎಲ್ಲ ನಿಂತಿದೆ

7 comments:

Vijayalakshmi said...

Remix ಚೆನ್ನಾಗಿದೆ ಕರ್ಣಾ. Original ಹಾಡಿನಲ್ಲಿ ಒಂದು ರೀತಿಯ ನೋವಿದ್ದರೆ ನಿನ್ನ ರೀಮಿಕ್ಸ್ ನಲ್ಲಿ ಇನೊಂದೇ ರೀತಿಯ ನೋವಿದೆ:-) Keep going.

ದೀಪಕ said...

ನಮಸ್ಕಾರ/\:)

ಇದು ರೀಮಿಕ್ಸ್ ಯುಗ ಅನ್ನುವುದು ಮತ್ತೊಮ್ಮೆ ಸಾಬೀತಾಯಿತು. ಎಲ್ಲಾ ಸ್ನೇಹಿತರ ಬ್ಲಾಗುಗಳಲ್ಲಿ ರೀಮಿಕ್ಸ್ ಹಾಡುಗಳು ಗೋಚರಿಸಲಾರ೦ಬಿಸಿವೆ.
ಮೊದಲು 'ಈ ಸ೦ಜೆ ಯಾಕಾಗಿದೆ' ಎ೦ದು ಈಗ 'ಮಳೆ ಯಾಕಾಗಿದೆ' ಅ೦ತ ಹೇಳಿದ್ದೀಯ. ಮು೦ದಾ ?

ಕೀ-ಬೋರ್ಡಿನಿ೦ದ ಬ್ಲಾಗುಗಳು ಹೀಗೆಯೇ ಟೈಪಿಸುವ೦ತಾಗಲಿ.

ಇ೦ತಿ,

ದೀಪಕ

ಸಿದ್ಧಾರ್ಥ said...

ಚೆನ್ನಾಗಿದೆ ಕಣ್ರೀ ನಿಮ್ಮ ರೀಮಿಕ್ಸು.
ಹೀಗೇ ಹೊಸ ಕಲ್ಪನೆಗಳು/ವಾಸ್ತವಗಳು ರೀಮಿಕ್ಸ್ ರೂಪದಲ್ಲಿ ಮೂಡಿಬರ್ತಾ ಇರ್ಲಿ...

C.A.Gundapi said...

Super maga .. Ulti one. One more stone to ur remix crown

lifeasIknowit said...

ha ha.. karna super!!...
especially dam munche enadru itta ano sangati chennagide and
...padya nange tumba eshtavagide..(male nintu hoda mele)

ಜಾತ್ರೆ said...

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded friends
-kannadasaahithya.com balaga

Srikanth said...

ತುಂಬಾ ಚೆನ್ನಾಗಿದೆ ನಿಮ್ಮ ಪದ್ಯ..