"ಈ ಸಂಜೆ ಯಾಕಾಗಿದೆ ನೀನಿಲ್ಲದೆ.........." ನಮ್ಮ ಸಕತ್ ಹಾಟ್ ರೇಡಿಯೊ ಸ್ಟೇಷನ್ ನಲ್ಲಿ ಸೋನು ನೀಗಮ್ ತುಂಬ ಇಂಪಾಗಿ ಹಾಡಿರುವ ಈ ಹಾಡನ್ನು ಎಫ್.ಎಂ ನಳ್ಳಿ ಕೇಳುತ್ತ ಆನಂದಿಸುತ್ತಿದ್ದ ನಾನು cab ನ ಕಿಟಕಿಯಿಂದ ಆಚೇಗೆ ನೂಡೀದಾಗ ನನ್ನ ಈಗೀನ ಸ್ಠಿತಿಗೂ ಈ ಹಾಡಿನಲ್ಲಿರೋ ಭಾವನೆಗೂ ಏನೂ ವ್ಯತ್ಯಾಸ ಅನ್ನಿಸಲಿಲ್ಲ , ಅರೆರೆ ಒಂದ್ನಿಮಿಷ ಯಾರಪ್ಪ ಅವ್ಳು ನಿನ್ನನ್ನ ಕಾಡ್ತ ಇರೋದು ಅಂತ ನೀವು ಕೆಳೋ ಮೊದಲೇ ಹೇಳ್ಬಿಡ್ತೀನಿ ನಾನು ಹೇಳ್ತಾ ಇರೋದು "ನಮ್ಮ ಬ್ಯಾಂಗ್ಲುರ್ (ಬೆಂಗಳುರು)" ನ ಟ್ರಾಫೀಕ್ ಬಗ್ಗೆ.
ಬೆಳಿಗ್ಗೆಯಿಂದ ನನ್ನನ್ನು ಏಡೆಬಿಡದೆ ಕಾಡಿದ ಈ ಟ್ರಾಫೀಕ್ಕು ಸಂಜೆಯಾದರೂ ಬೆನ್ನು ಬಿಟ್ಟಿಲ್ಲ. Office ವತಿಯಿಂದ ೩ ದಿನಗಳ training ಸಲುವಾಗಿ ದೋಮ್ಮಲೂರಿನಲ್ಲಿರುವ ಒಂದು ಸಂಸ್ಥೆಗೆ ಹೋಗಬೆಕಾಗಿತ್ತು. ಹಿಂದಿನ ರಾತ್ರಿಯೇ ನನ್ನ ಸಹಪಾಠಿಯೊಬ್ಬರು cab ಬುಕ್ ಮಾಡಿದ್ದರಿಂದ ಇನ್ನೂ ೩ ದಿನ ಆರಾಮಗಿ ಕಾರ್ ನಲ್ಲೆ ಹೋಗಬಹುದು ಅಂತ ಖುಷಿಯಾಗಿತ್ತು ,ಈ ಚಳಿಗಾಲದಲ್ಲಿ ೧ ಗಂಟೆ ತಡವಾಗಿ ಏದ್ದದ್ದೆ ನನಗೆ ಎಷ್ಟೋ ಸಂತೋಷ ಕೊಟ್ಟಿತ್ತು ;-) .ಬೆಳಿಗ್ಗೆ ಲೇಟಾಗಿ ಏದ್ದು ತಯಾರಾಗಿ ನಮ್ಮ Global kitchen ನಾದ "ನ್ಯೂ ಸಾಗರ್ ಫಾಸ್ಟ್ ಫುಡ್" ಹತ್ತಿರ ಕಾಯುತ್ತ ನಿಂತೆ. ಈ ಮೊದಲೇ ನಾನು ಬಸವೇಶ್ವರ ನಗರದಿಂದ ಬರ್ತಾ ಇದ್ದೆನೆಂದು ದೂರವಾಣಿಯ ಮೂಲಕ ನನ್ನ ಸಹಪಾಠಿ ಹೇಳಿದ್ದರಿಂದ ಜಾಸ್ತಿ ಹೊತ್ತು ಕಾಯಬೇಕಾಗಿ ಬರಲಿಲ್ಲ. ರಾಜಾಜಿನಗರದಿಂದ ದೋಮ್ಮಲೂರಿಗೆ ಒಂದು ಗಂಟೆಯಲ್ಲಿ ಆರಾಮಾಗಿ ತಲುಪಬಹುದೆಂಬ ನಿರೀಕ್ಷೆ ಇತ್ತು, ಅಷ್ಟರಲ್ಲಿ ಕಾರು ಬಂದೇ ಬಿಟ್ಟಿತು. ಆದ್ರೆ ನನ್ನ ನಿರೀಕ್ಷೆ ಹುಸಿಯಾಗಬಹುದೆಂದು ತಿಳಿದದ್ದು car ಹತ್ತಿದ ಮೇಲೆನೆ. ಇನ್ನೊಬ್ಬರನ್ನ ಜೆ.ಪಿ. ನಗರ ದಿಂದ pickup ಮಾಡ್ಬೇಕು ಅಂತ ಡ್ರೈವರ್ ಹೇಳಿದಾಗ ನನ್ನ ಎದೆ ಝಲ್ ಎಂದಿತ್ತು. ರಾಜಾಜಿನಗರ ಏಲ್ಲಿ, ಜೆ.ಪಿ. ನಗರ ಏಲ್ಲಿ , ದೋಮ್ಮಲೂರೆಲ್ಲಿ. ಈ route map ನ ಹಾಕಿದ ನಮ್ಮ ಆಫೀಸೀನ ಸಿಬ್ಬಂದಿಯನ್ನು ಇಬ್ಬರೂ ಶಪಿಸುತ್ತ ಬೇರೆ ವೀಧಿಯಿಲ್ಲದೆ ಜೆ.ಪಿ. ನಗರದ ಕಡೆ ಹೊರಟೇವು. ಇನ್ನೋಬ್ಬ ಸಹಪಾಠಿಯನ್ನು pick ಮಾಡಿ ದೋಮ್ಮಲೂರು ತಲುಪುವಷ್ಟರಲ್ಲಿ ೯:೪೫ ಆಗಿತ್ತು.ಹೇಗೊ ತಲುಪ್ಪಿದ್ದಾಯಿತು ಇನ್ನೂ training ಆದರೂ ಚೆನ್ನಾಗಿರಲೆಂದು ಆಶಿಸುತ್ತ ಉಳಿದಿದ್ದ ಒಂದೆ ಒಂದು ಕಡೆಯ ಸೀಟ್ ನಲ್ಲಿ ಹೋಗಿ ಕುಳಿತೆ (ನನಗೂ ಅದೇ ಬೇಕಾಗಿತ್ತು :) ). ಅದು Windows Programming ಟ್ರೈನಿಂಗು , ಅದೇಕೋ ನನಗೂ Windows ಗು ಅಷ್ಟಕಷ್ಟೆ ಹಾವು- ಮುಂಗಸಿ ಥರ. Instructor ತಮ್ಮ ಭೋಧನೆ ಯನ್ನ ಶುರು ಮಾಡಿದ್ರು, ಆರಂಭದಲ್ಲಿ ಸ್ವಲ್ಪ interesting ಆಗಿ ಇತ್ತು ಆದರೆ ಬರು ಬರುತ್ತ ಯಾಕೋ ಪೀಟಿಲು ಹಾಕ್ತಾ ಇದ್ದಾರೆನೋ ಅನ್ನಿಸ್ತು, ಊಟ ಮುಗಿಸಿದ ನಂತರವಂತೂ ನನ್ನ ಕಣ್ಣುಗಳು ನನ್ನನ್ನು ಸ್ವಪ್ನ ಲೋಕದೆಡೆಗೆ ಕೊಂಡೊಯ್ದವು. vibrator ಮೋಡ್ ನಲ್ಲಿದ್ದ ನನ್ನ ಮೋಬೈಲ್ ಸದ್ದಾಗುತಿದ್ದಂತೆ ಥಟ್ ಅಂತ ಏಚ್ಚರಗೊಂಡೆ, ದೂರದಲ್ಲಿ ಕುಳಿತಿದ್ದ ನನ್ನ ಸಹಪಾಠಿಯೊಬ್ಬರು ತಪ್ಪಿದ ಕರೆ (miss call) ಕೊಟ್ಟು ನನ್ನನ್ನು ಟೀ ಕುಡಿಯಲಿಕ್ಕೆ ಕರೆದರು. ಬೀಸಿ ಬೀಸಿ ಟೀ ಗಂಟಲೋಳಗಿಳಿಯುತ್ತಿದ್ದಂತೆ ಮುಖದಲ್ಲಿ ಸ್ವಲ್ಪ ಉತ್ಸಾಹ ಬಂತು. ಮತ್ತೇ ಒಂದು ಗಂಟೆ ಕ್ಲಾಸ್ ನಲ್ಲಿ ಕುಳಿತು ಹೊರಡಲು ಸಜ್ಜಾಗಿ ನಿಂತೇವು.ಈ ಮೊದಲೇ (ಊಟದ ಸಮಯದಲ್ಲಿ)ನೀರ್ಧರಿಸಿದಂತೆ ಜೆ.ಪಿ. ನಗರದ ಕಡೆ ಹೋಗಬೆಕಾಗಿದ್ದ ಇನ್ನೊಬ್ಬ ಸಹಪಾಠಿಗೆ ಬೇರೆ cab ಬೂಕ್ ಮಾಡಿಬಿಟ್ಟೇವು. ಬೆಳಿಗ್ಗೆ ಪಟ್ಟ ಪಾಡು ನೆನೆದು ಸಂಜೆಯಾದರೂ ನೇರವಾಗಿ ರಾಜಾಜಿನಗರಕ್ಕೆ ಹೋಗಿ ಬೇಗ ಮನೆ ತಲುಪಬಹುದೆಂಬ ಖುಶಿಯಿಂದ ಕ್ಯಾಬ್ ನಲ್ಲಿ ಕೂತ ನಮಗೆ ಇನ್ನೊಂದು ಆಘಾತ ಕಾದಿತ್ತು,ಆರ್.ಟಿ ನಗರಕ್ಕೆ ಹೋಗಬೆಕಾಗಿದ್ದ ಇನ್ನೋಬ್ಬ ಸಹಪಾಠಿಯನ್ನು ಕೂಡ ನಮ್ಮ ಕ್ಯಾಬ್ ನಲ್ಲೆ ಹತ್ತಿಸಿಕೊಂಡು ಹೋಗಬೆಕು ಎಂದು ಹೇಳಿದರು. ಉಕ್ಕಿ ಬಂದ ಕೋಪ , ಏನೂ ಮಾಡಲಾಗದ ನಿಸ್ಸಾಹಯಕತೆ ನನ್ನನ್ನು ತೆಪ್ಪಗೆ ಕೂರುವಂತೆ ಮಾಡಿತ್ತು, ಗಣೇಶ್ ನ ಜನಪ್ರಿಯವಾದ "ಇ ಟೈಮ್ ಅಂದ್ರೆ ಪಕ್ಕಾ 420 ಕಣ್ರಿ...." ಸಾಲುಗಳು ನೆನಪಾಗುತ್ತಿದ್ದವು. ನಮಗೆ ಆದ ಪಾಡು ನಮ್ಮ ಶತ್ರುಗಳಿಗೂ ಆಗಬಾರದು ಅಂತ ಎಲ್ಲರೂ ಮಾತಡಿಕೊಳ್ಳುತಿದ್ದೆವು. ಅದೇ ವೇಳೆಗೆ
ಕಾರಿನ ಎಫ್.ಎಂ. ನಲ್ಲಿ "ಈ ಸಂಜೆ ಯಾಕಾಗೀದೆ .." ಹಾಡು ಬಂದಾಗ , ಇದೇ ಹಾಡನ್ನು ನನ್ನ ಸಂಧರ್ಭಕ್ಕೆ ಹೋಲಿಸಿದಾಗ ಮೂಡಿಬಂದ ಸಾಲುಗಳು
ಈ ಸಂಜೆ ಸಾಕಾಗಿದೆ ನಿನ್ನಿಂದಲೆ
ಈ ಸಂಜೆ ಸಾಕಾಗಿದೆ
ಒನ್-ವೇ ಗಳು ಹೆಚ್ಚಾಗೀವೆ
ಹೈವೇಗಳು ಹಾಳಾಗಿವೆ
ಈ ದೂರ ಅತಿಯಾಗಿದೆ ಓಓಓ .......ದಿನನಿತ್ಯದ ಗೋಳಾಗಿದೆ
ಈ ಸಂಜೆ ಸಾಕಾಗಿದೆ ನಿನ್ನಿಂದಲೆ
ಈ ಸಂಜೆ ಸಾಕಾಗಿದೆ
ಎಲ್ಹೋದರೂ ರೆಡ್ ಸಿಗ್ನಲೂ
ಬಲು ದೂರವೋ ಗ್ರೀನ್ ಸಿಗ್ನಲು
ಈ ರೋಡು ಬ್ಯುಸಿಯಾಗಿದೆ ಓಓಓ ....... ಬೆಂಗಳೂರು ಹಾಳಾಗಿದೆ.
ಹೀಗೆ ರಾಜಾಜಿನಗರದಿಂದ ಆರಂಭವಾದ ನಮ್ಮ ಬೆಂಗಳೂರು ದರ್ಶನ ಮಾಗಡಿ ರಸ್ತೆ, ಬಿನ್ನಿ ಮಿಲ್ಲು,ಚಾಮರಜಪೇಟೆ,ಬಸವನಗುಡಿ ರಸ್ತೆ,ಗಾಂಧಿ ಬಜಾರ್,ಸೌತ್ ಎಂಡ್,ಜಯನಗರ, ಜೆ.ಪಿ.ನಗರ,ಬನ್ನೇರುಘಟ್ಟ ರಸ್ತೆ, ಹೋಸುರು ರಸ್ತೆ,ಆಡುಗೋಡಿ,ಕೋರಮಂಗಲ,ಓಳ ವರ್ತುಲ ರಸ್ತೆ,ದೊಮ್ಮಲೂರು, ಇಂದಿರಾನಗರ, ಅಲಸೂರು, ನಂದಿದುರ್ಗ ರಸ್ತೆ, ಜೆ.ಸಿ,ನಗರ,ಆರ್.ಟಿ.ನಗರ, ಮೇಖ್ರಿ ವೃತ್ತ ,ಐ.ಐ.ಎಸ್.ಸಿ, ಮಲ್ಲೇಶ್ವರ ಕೊನೆಗೆ ರಾಜಾಜಿನಗರ ಬಂದಾಗ ಸಮಯ ೮ ಗಂಟೆಯಾಗಿತ್ತು.
ಅಂತು ಇಂತು ಮನೆ ಬಂತು
ನಾ ಓಡಿದೆ ಮನೆಗೆ ಚಿಗರೆಯಂತೆ
ಆ ಟ್ರಾಫಿಕ್ ಜಾಮು ಆ ಸಿಗ್ನಲ್ ಲೈಟು
ಮರೆತೆ ಹೀರುತ್ತ ನಾ ಕಾಫಿ ಬೈಟು
ನಾಳೆ ಹತ್ತೇನು ಆ ಕಾರನ್ನು
ಹಿಡಿಯುವೆನು B.M.T.C ಬಸ್ಸು ನಾನು
ಈ ಪೋಸ್ಟಗೆ ತಲೆಬರಹವನ್ನು ಸೂಚಿಸಿದ ಗೆಳೆಯ ಸಿದ್ದು ಗೆ ಧನ್ಯವಾದಗಳು ;-)
6 comments:
ನಮಸ್ಕಾರ/\:)
ಲೇಖನದ execution ಸೊಗಸಾಗಿದೆ. ಜನಪ್ರಿಯ ಹಾಡುಗಳನ್ನು ಈಗಿನ ಬೆ೦ಗಳೂರು Traffic Jamಗೆ ಹೋಲಿಕೆ ಮಾಡಿ ರಚಿಸಿದ ಸಾಹಿತ್ಯ ಸೊಗಸಾಗಿದೆ.
ಹೀಗೆಯೇ ನಿನ್ನ ಲೇಖನಗಳು ಬರುತ್ತಿರಲಿ ಎ೦ದು ಆಶಿಸುತ್ತೇನೆ.
ಧನ್ಯವಾದಗಳೊ೦ದಿಗೆ,
ಇ೦ತಿ,
ದೀಪಕ
ಚೆನ್ನಾಗಿದೆ ಸ್ವಾಮಿ ಲೇಖನ. ಆದ್ರೆ, ಎಲ್ಲೊ ರಾಜಾಜಿನಗರ ಅನ್ನೊ ಮೂಲೆಲಿ ಕುಂತ್‌ಕಂಡು ಹೀಗಂದ್ರೆ ಹ್ಯಾಂಗೆ? ನಮ್ಮ ಹಾಂಗೆ ಮಾರತ್‌ಹಳ್ಳಿಯಂತಾ center of cityಲಿ ಇದ್ದಿದ್ರೆ ಇಂತಾ ಪ್ರಾಬ್ಲಮ್ಮೇ ಇರ್ತಿರ್ಲಿಲ್ಲಾ. ರಾತ್ರಿ ೧೦ ಗಂಟೆಗೆ ಕ್ಯಾಬಲ್ಲಿ ಮನೀಕಂಡ್ರೆ, ಬೆಳಗಾಗುವಷ್ಟ್ರಲ್ಲಿ ಮುಟ್‌ಬಿಡ್ತಿದ್ರಿ... ದೊಮ್ಲೂರಾ...
ಹಿಂಗೇ ಮುಂದ್ವೊರ್ಸಿ... ಲೇಖನ.
ಕರ್ಣ..
ಓದ್ತಾಇದ್ರೆ ನಿನ್ ಪಕ್ಕದಲ್ಲೇ ನಿಂತಿದ್ದೆ ಅನ್ಸ್ತು..
ವಸುಧ
ನಿನ್ನ ಲೇಖನ ಚಲೋ ಐತಿ.
ಅದ್ರೆ ಖುಷಿ ಆಗಿದ್ದೇನಂದ್ರ, ನಾನೊಬ್ಬನೇ ಕೊರಿಸ್ಕೊಳ್ಲ್ಲಿಲ್ಲ.
ಎಲ್ಲರು ಕೊರಿಸ್ಕೊಂಡ್ರು....ಅವತ್ತು ನಂಗ ಸಾಕ್ ಸಾಕ್ ಮಾಡಿತ್ತಿದ್ದಿ...
ತಮಾಷೆ ಬಿಟ್ಟು.....ಲೇಖನ ಚಲೋ ಇತ್ತು....
ಹಿಂಗ ಬರಿತಿರಪ ಖೋಡಿ...
Hi Karmna,
Lekhana tumba chennagide........Heege muduvaresu......
ಆ ಹಾಡು ಹುಟ್ಟಿದ್ದೇ ಟ್ರಾಫಿಕ್ ಜಾಮ್ ನಲ್ಲಿ . ಯಾಕಾದ್ರೂ ಸಂಜೆ ಆಗುತ್ತೋ ಅಂತ ಯಾವ್ದೋ ಆಟೋನವನು ಗೊಣಗಿದ್ದೇ ಈ ಹಾಡಿಗೆ ಪ್ರೇರಣೆ
Post a Comment